ನನ್ನ ಪ್ರೀತಿಯ ಅಜ್ಜಿ

ಇದನ್ನು ಬರೀಬೇಕಾದ್ರೆ ಮನಸ್ಸಿಗೆ ಎನೋ ಸಂಕಟ, ಕಣ್ಣಂಚಲ್ಲಿ ನೀರು.ಮುಂದಿನ ಸರಿ ಮನೆಗೆ ಬಂದಾಗ ನೀನಿಲ್ಲದೇ ಮನೆ ಖಾಲಿ ಖಾಲಿ ಅಜ್ಜಿ.

ನಾವು ಊರಿಗೆ ಬರೋ ದಿನ ನೀನು ಜಗಲೀಲಿ ನಮಗಾಗಿ ಕಾಯ್ತ ಇರ್ತಿದ್ದು, ಬಿಸಿ ಬಿಸಿ ಕಾಫಿ ಮಾಡಿ ಕೊಡ್ತಿದ್ದು, ಯಾವಾಗ್ಲೂ ನಗ್ತ ನಗ್ತ ಇದ್ದಿದ್ದು ಹೇಗೆ ಮರೆಯೋಕೆ ಸಾಧ್ಯ ನೀನೇ ಹೇಳು?





ನಾನು ಚಿಕ್ಕವಳಿದ್ದಾಗ ಕೆಟ್ಟ ಕನಸಿಗೆ ಹೆದರಿ ಬೆಚ್ಚಿದಾಗ, ನೀನು ಬೆಂಕಿ ಚೌಡಮ್ಮ ನ ಜಪಿಸಲು ಹೇಳಿ ಸಮಾಧಾನ ಮಾಡಿದ್ಯಲ, ಅದಿನ್ನು ಕಣ್ಣಿಗೆ ಕಟ್ಟಿದ ಹಾಗಿದೆ…. ಆಫೀಸಿಗೆ ಹೋಗುವಾಗ ಹುಡುಗರ ನೋಡಿ ನಗ್ಬೇಡ, ಕಾಲ ಸರಿ ಇಲ್ಲ, ನಕ್ಕಿದ್ರೆ ಹಿಂದೆ ಬೀಳ್ತಾರೆ ಅಂತ ಹೇಳೋ ಆ ನಿನ್ನ Innocent ಮಾತುಗಳು….


92yrs not a joke!, ಕೊನೆವರೆಗೂ ಒಂದ್ ಚೂರು ತೊಂದರೆ ಕೊಡ್ಲಿಲ್ಲ, ಹೋಗ್ತಾನು ಹಾಗೆ..ಸಾಥಽಕತೆಯ ಬಾಳು ಅಜ್ಜಿ ನಿಂದು…ಕೊನೆ ಬಾರಿ ನಿನ್ನ ನೋಡೋಕೆ ಆಗತ್ತೋ ಇಲ್ವೂ ಅಂತ ಅನ್ಕೂಂಡಿದ್ದೆ, ಬೆಂಗಳೂರು-ಸಾಗರ ದಾರಿಯುದ್ದಕ್ಕೂ ಅದೆೇ ಚಿಂತೆ.. 5 ನಿಮಿಷ late ಆಗಿದ್ರೂ ಅಗ್ನಿ ಸ್ಪಷಽ ಆಗೋಗ್ತಿತ್ತು! ಆದರೆ ಮೊಮ್ಮಗಳ ನೋಡ್ಬೇಕಂತ ನೀನು ಕೂಡ ಕಾದೆ ನೋಡು! 

ನಾನು ಯಾವಾಗ್ಲೂ ಅಮ್ಮಗೆ ಹೇಳ್ತೀನಿ, ನೀನು ಅಜ್ಜಿ ತರಾನೆ ಅಂತ..ಅದ್ಕೆ ಇರ್ಬೇಕು ನನ್ನೂ ಎಲ್ಲ ಹಸನ್ನ್ಮುಖಿ ಅಂತಾರೆ.ಎಷ್ಟಾದ್ರೂ ಸೇಮ್ genes ಅಲ್ವಾ?

We miss you a lot ಅಜ್ಜಿ, ಮತ್ತೇ ಬನ್ನಿ plz ♥️


-ಇಂತಿ ನಿನ್ನ ಪ್ರೀತಿಯ ಕೃಪಾ


Comments

Popular Posts